ಅಕ್ವಿನಸ್, ಸೇಂಟ್ ಥಾಮಸ್(1226-1274). ಪ್ರಸಿದ್ಧ ತಾರ್ಕಿಕ. ಮತಧರ್ಮ ಶಾಸ್ತ್ರಜ್ಞನಾದ ಈತ ಶ್ರೀಮಂತ ಮನೆತನದಲ್ಲಿ ಹುಟ್ಟಿ, ತಂದೆತಾಯಿಗಳ ಇಷ್ಟಕ್ಕೆ ವಿರೋಧವಾಗಿ ಸೇಂಟ್ ಡಾಮಿನಿಕ್ ಪಂಥದ ಸಂನ್ಯಾಸಿಯಾದ. ಇವನ ಅಸಾಧಾರಣ ಪ್ರತಿಭೆ ಬಾಲ್ಯದಲ್ಲೇ ಕಂಡುಬಂದಿತು. ಪ್ರಖ್ಯಾತ ದೇವತಾಶಾಸ್ತ್ರಪಂಡಿತನಾದ ಆಲ್ಬರ್ಟಸ್ ಮ್ಯಾಗ್ನಸ್ ಎಂಬುವನ ಶಿಷ್ಯನಾಗಿದ್ದು ಮತಧರ್ಮಪಾಂಡಿತ್ಯದಲ್ಲಿ ಅದ್ವಿತೀಯನೆಂದು ಹೆಸರು ಗಳಿಸಿದ. ಕ್ರೈಸ್ತಧರ್ಮೀಯರಲ್ಲಿ ಅಭಿಪ್ರಾಯಭೇದಗಳು ಹುಟ್ಟಿ ನಾನಾ ಪಂಥಗಳು ನಿರ್ಮಾಣವಾಗುತ್ತಿದ್ದ ಕಾಲ ಅದು. ಡಾಮಿನಿಕ್ ಪಂಥದ ತತ್ವ್ತಗಳನ್ನು ಸಮರ್ಥಿಸುವುದಕ್ಕಾಗಿ ಧರ್ಮಸಮ್ಮೇಳನಗಳು ನಡೆಯುತ್ತಿದ್ದ ಕಡೆಗಳಿಗೆಲ್ಲ ಅಕ್ವಿನಸ್ ಹೋಗಿ ಬಂದ. ನಾಲ್ಕನೆಯ ಅರ್ಬನ್, ಮೂರನೆಯ ಕ್ಲೆಮೆಂಟ್ ಮುಂತಾದ ಪೋಪರೂ ಧಾರ್ಮಿಕ ಸಮಸ್ಯೆಗಳ ಪರಿಹಾರಕ್ಕೆ ಇವನ ವಿದ್ವತ್ತಿನ ನೆರವು ಪಡೆಯುತ್ತಿದ್ದರು. ಇಂಥ ನೆರವು ನೀಡುವುದಕ್ಕೆಂದು ಲಯನ್ಸ್ ನಗರಕ್ಕೆ ಪ್ರಯಾಣ ಮಾಡುತ್ತಿದ್ದಾಗ 1274ರಲ್ಲಿ ಕಾಲವಾದ. 1323ರಲ್ಲಿ ಇವನನ್ನು ಸಂತನನ್ನಾಗಿ ಪರಿಗಣಿಸಲಾಯಿತು. == ಬಾಹ್ಯ ಸಂಪರ್ಕಗಳು == . ( 2014-12-28 ವೇಬ್ಯಾಕ್ ಮೆಷಿನ್ ನಲ್ಲಿ.) . ' ". " . . 1913. {{ }}: : |HIDE_PARAMETER4=, |HIDE_PARAMETER2=, |HIDE_PARAMETERq=, |HIDE_PARAMETER20=, |HIDE_PARAMETER5=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, |HIDE_PARAMETER1=, |HIDE_PARAMETER3= () . (1912), . . 2010-06-09 ವೇಬ್ಯಾಕ್ ಮೆಷಿನ್ ನಲ್ಲಿ. . . . . 2014-08-09 ವೇಬ್ಯಾಕ್ ಮೆಷಿನ್ ನಲ್ಲಿ. (1610)